Skip Navigation

National Geographic Society Este programa se distribuye en los Estados Unidos y Canadá por National Geographic y EHD. [obtenga más información]

DVD ilustrado plurilingüe

La biología del desarrollo prenatal


6 a 8 semanas


ಪ್ರಸವ ಪೂರ್ವ ಬೆಳವಣಿಗೆ ಜೀವಶಾಸ್ತ್ರ

.ಕನ್ನಡ [Kannada]


 

Descargar versión en formato PDF  ¿Qué es PDF?
 

Desarrollo embrionario: 6 a 8 semanas

Capítulo 20   6 semanas: movimiento y sensación

6ನೇ ವಾರದ ವೇಳೆಗೆ ಮೆದುಳಿನ ಅರ್ಧಗೋಳವು ಬೆಳೆಯುತ್ತಿರುವುದು ಮೆದುಳಿನ ಇತರೆ ಭಾಗಗಳಿಗೆ ಹೋಲಿಸಿದರೆ ಇದು ಹೆಚ್ಚು ವೇಗವಾಗಿ ಬೆಳೆಯುವುದು.

ಭ್ರೂಣವು ಸ್ವಯಂಸ್ಫೂರ್ತಿಯ ಹಾಗೂ ಪ್ರತಿಕ್ರಿಯಾತ್ಮಕ ಚಲನೆಯನ್ನು ಪ್ರಾರಂಭಿಸುವುದು. ಆ ಬಗೆಯ ಚಲನೆಯ ಅವಶ್ಯಕತೆಯ ಸಾಧಾರಣ ನರ ಸ್ನಾಯುಗಳ ಬೆಳವಣಿಗೆಗೆ ಉತ್ತೇಜನಕಾರಿಯಾಗಿದೆ.

ಮೌಖಿಕ ಪ್ರದೇಶದ ಸ್ಪರ್ಶದಿಂದಾಗಿ ಭ್ರೂಣವು ತನ್ನ ಶಿರವನ್ನು ಹಿಂದೆಗೆಯುವ ಪ್ರಕ್ರಿಯೆಯನ್ನುಂಟು ಮಾಡುವುದು.

Capítulo 21   Formación del oído externo y los glóbulos

ಬಾಹ್ಯ ಕಿವಿಗಳು ಆಕಾರ ತಳೆಯಲಾರಂಭಿಸುವವು.

6 ವಾರಗಳ ವೇಳೆಗೆ, ಯಕೃತ್ತಿನಲ್ಲಿ ರಕ್ತಕೋಶಗಳ ಉತ್ಪತ್ತಿ ಕಾರ್ಯಗತವಾಗುವುದು ಇಲ್ಲಿ ಮೇದಸ್ಸಿನ ಉಪಸ್ಥಿತಿ ಇರುವುದು. ಈ ಬಗೆಯ ಬಿಳಿ ರಕ್ತ ಕೋಶವು ರೋಗ ನಿರೋಧಕ ವ್ಯವಸ್ಥೆಯ ಬೆಳವಣಿಗೆಗೆ ಪ್ರಮುಖವಾಗಿದೆ.

Capítulo 22   Diafragma e intestinos

ವಪೆಯು, ಉಸಿರಾಟದಲ್ಲಿ ಬಳಸುವ ಪ್ರಾಥಮಿಕ ಸ್ನಾಯುವಾಗಿದ್ದು, 6 ವಾರಗಳಲ್ಲಿ ವ್ಯಾಪಕವಾಗಿ ರೂಪುಗೊಳ್ಳುತ್ತದೆ.

ಕರುಳಿನ ಒಂದು ಭಾಗ ತಾತ್ಕಾಲಿಕವಾಗಿ ಹೊಕ್ಕಳು ಬಳ್ಳಿಯೆಡೆಗೆ ಚಾಚಿರುವುದು. ಈ ಸಾಮಾನ್ಯ ಪ್ರಕ್ರಿಯೆಯನ್ನು ಶಾರೀರಿಕ ಅಂಡವಾಯುಕರಣ ಎನ್ನುವರು, ಇದು ಉದರ ಭಾಗದಲ್ಲಿ ಇತರ ಅಂಗಗಳ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.

Capítulo 23   Placas de las manos y ondas cerebrales

ಸೂಕ್ಷ್ಮವಾದ ಚಪ್ಪಟೆತನವನ್ನು ಕೈ ಆಕೃತಿಗಳು 6 ವಾರಕ್ಕೆ ಬೆಳೆಸಿಕೊಳ್ಳುವವು.

ಮೆದುಳು ತರಂಗಗಳು 6 ವಾರ ಹಾಗೂ 2 ದಿನಗಳ ವೇಳೆಗೆ ದಾಖಲಾಗುವವು.

Capítulo 24   Formación del pezón

ಮುಂಡದ ಎರಡು ಬದಿಗಳಲ್ಲಿ ಮೊಲೆಯ ತೊಟ್ಟುಗಳು ಗೊಚರಿಸುವವು ಇವು ತಮ್ಮ ಸಹಜ ಸ್ಥಾನವಾದ ಎದೆಯ ಮುಂಭಾಗ ತಲುಪುವ ಸ್ವಲ್ಪ ಮೊದಲು ಗೋಚರಿಸುವುದು.

Capítulo 25   Desarrollo de las extremidades

6 1 /2 ವಾರದ ವೇಳೆಗೆ, ಮೊಳಕೈ ಸ್ಫುಟಗೊಳ್ಳುವುದು, ಬೆರಳುಗಳು ಪ್ರತ್ಯೇಕಗೊಳ್ಳುವುದು, ಹಾಗೂ ಕರ ಚಾಲನೆಯನ್ನೂ ನೋಡಬಹುದು

ಆಸಿಫಿಕೇಶನ್ ಎಂದು ಕರೆಯುವ ಮೂಳೆ ನಿರ್ಮಾಣ ಕಾರ್ಯವು, ಕಾಲ್ವಿಕಲ್ ನೊಳಗೆ, ಅಥವಾ ಕಂಠದ ಮೂಳೆಯೊಳಗೆ ಆರಂಭವಾಗುವುದು, ಹಾಗೂ ಅದೆ ರೀತಿ ಮೇಲಿನ, ಕೆಳಗಿನ ದವಡೆಯ ಮೂಳೆಗಳಲ್ಲಿ ಆರಂಭವಾಗುವುದು

Capítulo 26   7 semanas: hipo y reflejo de sobresalto

7ನೆ ವಾರದ ವೇಳೆಗೆ ಬಿಕ್ಕಳಿಕೆಯನ್ನು ಗಮನಿಸಬಹುದು,

ಇದೀಗ ಕಾಲುಗಳ ಚಲನೆಯನ್ನು ನೋಡಬಹುದು, ಜೊತೆಗೆ ಅಚ್ಚರಿಯ ಪ್ರತಿಕ್ರಿಯೆ ಇರುವುದು.

Capítulo 27   El corazón en maduración

4 ಗೂಡುಗಳುಳ್ಳ ಹೃದಯವು ಬಹುಮಟ್ಟಿಗೆ ಸಂಪೂರ್ಣವಾಗಿರುತ್ತದೆ. ಸರಾಸರಿ, ಈಗ ಹೃದಯವು ಪ್ರತಿ ನಿಮಿಷ 167 ಬಾರಿ ಬಡಿಯುವುದು.

7 1/2 ವಾರದಲ್ಲಿ ಹೃದಯದ ವಿದ್ಯುತ್ ರೀತಿಯ ಚಟುವಟಿಕೆ ದಾಖಲಾಗುತ್ತದೆ. ವಯಸ್ಕರಲ್ಲಿ ಕಂಡುಬರುವ ರೀತಿಯ ತರಂಗಗಳು ಕಂಡುಬರುತ್ತವೆ.

Capítulo 28   Ovarios y ojos

ಸ್ತ್ರೀ ಶಿಶುಗಳಲ್ಲಿ 7 ವಾರದ ವೇಳೆಗೆ ಅಂಡಾಶಗಳನ್ನು ಗುರುತಿಸಬಹುದು.

7 1/2 ವಾರದ ವೇಳೆಗೆ ವರ್ಣಯುಕ್ತ ಅಕ್ಷಿಪಟವನ್ನು ಕಣ್ಣಿನಲ್ಲಿ ಸುಲಭವಾಗಿ ನೋಡಬಹುದು ಹಾಗೂ ಕಣ್ಣು ರೆಪ್ಪೆಗಳು, ವೇಗವಾಗಿ ಬೆಳೆಯುವ ಅವಧಿ ಪ್ರಾರಂಭವಾಗುವುದು.

Capítulo 29   Dedos de las manos y de los pies

ಬೆರಳುಗಳು ಪ್ರತ್ಯೇಕವಾಗುವವು ಕಾಲ್ಬೆರೆಳುಗಳು ಕೇವಲ ಮೂಲದಲ್ಲಿ ಕೂಡಿಕೊಂಡಿರುವವು.

ಕೈಗಳು ಪರಸ್ಪರ ಹತ್ತಿರ ಬರಬಲ್ಲವು, ಅದೇ ರೀತಿ ಕಾಲುಗಳು ಕೂಡ.

ಮೊಣಕಾಲು ಸಂದಿಗಳು ಸಹ ಗೋಚರಿಸಲಾರಂಭಿಸುತ್ತವೆ.
6 a 8 semanas