Skip Navigation

National Geographic Society Este programa se distribuye en los Estados Unidos y Canadá por National Geographic y EHD. [obtenga más información]

DVD ilustrado plurilingüe

La biología del desarrollo prenatal




ಪ್ರಸವ ಪೂರ್ವ ಬೆಳವಣಿಗೆ ಜೀವಶಾಸ್ತ್ರ

.ಕನ್ನಡ [Kannada]


 

Descargar versión en formato PDF  ¿Qué es PDF?
 

El período embrionario (Las primeras 8 semanas)

Desarrollo embrionario: Las primeras 4 semanas

Capítulo 3   Fecundación

ಜೀವಶಾಸ್ತ್ರದ ಮಾತಿನಲ್ಲಿ ಹೇಳುವುದಾದರೆ, "ಮಾನವ ಬೇಳವಣಿಗೆಯು ನಿಶೇಚನದಲ್ಲಿ ಆರಂಭಗೊಳ್ಳುವುದು" ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ತಮ್ಮ ಪ್ರತಿ 23 ವರ್ಣತಂತುಗಳನ್ನು ಸೇರಿಸಿದಾಗ ಹಾಗೂಸಂತಾನೋತ್ಪತ್ತಿ ಕೋಶಗಳನ್ನು ಸಂಲಗ್ನಿಸಿದಾಗ.

ಮಹಿಳೆಯ ಸಂತಾನೋತ್ಪತ್ತಿ ಕೋಶವನ್ನು ಸಾಮಾನ್ಯವಾಗಿ ತತ್ತಿಎಂದು ಕರೆಯುವರು ಅದರೆ ಸರಿಯಾದ ಶಬ್ದವೆಂದರೆ ಅಂಡಾಣು

ಅದೇ ರೀತಿ ಪುರುಷನ ಸಂತಾನೋತ್ಪತ್ತಿ ಕೋಶವನ್ನು ವ್ಯಾಪಕವಾಗಿ ಧಾತುವೆಂದು ಹೇಳುವರು ಅಂದರೆ ಸರಿಶಬ್ದವೆಂದರೆ ವೀರ್ಯಾಣು.

ಮಹಿಳೆಯ ಅಂಡಾಶಯದಿಂದ ಅಂಡಾಣುವು ಬಿಡುಗಡೆಗೊಂಡ ಬಳಿಕ ಅದನ್ನು ತತ್ತೀಕರಣ ಪ್ರಕ್ರಿಯೆ ಎನ್ನುವರು, ಅಂಡಾಣು ಹಾಗೂ ವೀರ್ಯಾಣುಗಳು ಸಮ್ಮಿಲನವು ಯೋನಿಯ ಯಾವುದೇ ನಾಳದೊಳಗೆ ಘಟಿಸಿದಾಗ, ಅದನ್ನು ಫಾಲೋಪಿಯನ್ ನಾಳವೆಂದು ಕರೆಯುವುವರು.

ಯೋನಿಯ ನಾಳಗಳು ಮಹಿಳೆಯ ಅಂಡಾಣುವನ್ನು ಅವಳ ಗರ್ಭಾಶಯದೊಡನೆ ಸಂಪರ್ಕಿಸಲು ನೆರವಾಗುತ್ತದೆ.

ಸಂಲಗ್ನದ ಫಲಿತಾಂಶದಿಂದುಂಟಾಗುವ ಏಕಕೋಶ ಭ್ರೂಣವನ್ನು ಜೀವಾಣು ಎನ್ನುವರು, ಇದರರ್ಥ ಸಮಾಗಮ ಅಥವಾ ಜೋಡಣೆ ಎಂದು.

Capítulo 4   ADN, división celular y factor temprano de embarazo

ಜೀವಾಣುವಿನಲ್ಲಿನ 46 ವರ್ಣತಂತುಗಳು ವಿಶಿಷ್ಟವಾದ ಮೊದಲ ಆವೃತ್ತಿಯನ್ನು ಪ್ರತಿನಿಧಿಸುತ್ತದೆ. ಹೊಸ ವ್ಯಕ್ತಿಯ ಸಂಪೂರ್ಣ ವಂಶಾವಳಿಯ ನೀಲನಕ್ಷೆ ಹೊಂದಿರುತ್ತದೆ. ಈ ಶೃಂಗ ಯೋಜನೆಯು ಡಿಎನ್ಎ ಎಂದು ಕರೆಯುವ ಬಿಗಿಯಾಗಿ ಸುರುಳಿಗೊಂಡ ಅಣುವಿನಲ್ಲಿರುವುದು. ಅವುಗಳು ನಿರ್ದೇಶನಗಳನ್ನು ಒಳಗೊಂಡಿರುತ್ತದೆ ಸಂಪೂರ್ಣ ದೇಹದ ಬೆಳವಣಿಗೆಯ ಬಗೆಗೆ.

ಡಿಎನ್ಎ ಅಣುಗಳು ತಿರುಚಿದ ಏಣಿಯ ರೂಪದಲ್ಲಿದ್ದು. ಅವುಗಳನ್ನು ದ್ವಿಪದಿ ರಚನೆ ಎಂದು ಕರೆಯುವರು. ಏಣಿಯ ಸುತ್ತುಗಳು ಜೋಡಿ ಅಣುಗಳಿಂದ, ಅಥವಾ ಕ್ಷಾರಗಳಾದ ಗುವಾನೈನ್, ಸೈಟೊಸಿನ್, ಅಡಿನೈನ್ ಹಾಗೂ ಥೈಮಿನ್ ನಿಂದ ಕೂಡಿರುತ್ತವೆ,

ಗುವಾನೈನ್ ಗಳು ಕೇವಲ ಸೈಟೋಸಿನ್ ನೊಂದಿಗೆ, ಹಾಗೂ ಅಡಿನೈನ್ ಕೇವಲ ಥೈಮಿನ್ ನೊಂದಿಗೆ ಜೋಡಿಯಾಗಿರುವವು. ಪ್ರತಿ ಮಾನವ ಕೋಶವು ಸುಮಾರು 3 ಶತಕೋಟಿಯಷ್ಟು ಈ ಬಗೆಯ ಜೋಡಿಯನ್ನು ಹೊಂದಿರುತ್ತವೆ.

ಪ್ರತಿಕೋಶದ ಡಿಎನ್ಎಯು ಎಷ್ಟೊಂದು ಮಾಹಿತಿ ಹೊಂದಿರುತ್ತದೆ ಎಂದರೆ ಅವುಗಳನ್ನು ಮುದ್ರಿತ ಶಬ್ದಗಳಲ್ಲಿ ಪ್ರತಿನಿಧಿಸುವುದಾದರೆ, ಪ್ರತಿ ಕ್ಷಾರದ ಮೊದಲ ಅಕ್ಷರವನ್ನು ಪಟ್ಟಿ ಮಾಡುತ್ತ ಹೋದರೆ 1.5 ದಶಲಕ್ಷ ಪುಟಗಳ ಅವಶ್ಯಕತೆ ಇದೆ!

ಒಂದರ ಪಕ್ಕದಲ್ಲಿ ಒಂದನ್ನು ಇಡುತ್ತ ಹೋದರೆ, ಒಂದು ಮಾನವ ಕೋಶದಲ್ಲನ ಡಿಎನ್ಎಯ ಉದ್ದ 3 1/3 ಅಡಿ ಅಥವಾ ಒಂದು ಮೀಟರ್ ಆಗಿರುತ್ತದೆ.

ಎಲ್ಲ ಡಿಎನ್ಎಗಳ ಸುರುಳಿಯನ್ನು ನಾವು ಬಿಚ್ಚಬಲ್ಲೆವಾದರೆ ವಯಸ್ಕರ ಸಹಸ್ರ ಕೋಟಿ ಕೋಶಗಳಲ್ಲಿ, ಅದು 63 ಶತಮೈಲಿಗಿಂತ ಹೆಚ್ಚು ಉದ್ದವಾಗಿರುತ್ತದೆ. ಇದರ ದೂರವು ಭೂಮಿಯಿಂದ ಸೂರ್ಯನವರೆಗು ತಲುಪಿ ಹಿಂದಿರುಗಲು ಇರುವ ದೂರದ 340 ಪಟ್ಟು ಇರುವುದು.

ಸುಮಾರು ನಿಶೇಚನದ 24 ರಿಂದ 30 ಗಂಟೆಗಳ ತರುವಾಯ, ಜೀವಾಣುವು ತನ್ನ ಮೊದಲ ಕೋಶ ವಿಭಜನೆಯನ್ನು ಪೂರ್ಣಗೊಳಿಸುವುದು. ಮೈಟೊಸಿಸ್ ಪ್ರಕ್ರಿಯೆಯ ಮೂಲಕ, ಒಂದು ಕೋಶವು ಎರಡಾಗಿ ವಿಭಜಿಸುವುದು ಎರಡು ನಾಲ್ಕಾಗಿ, ಹಾಗೆ ಮುಂದುವರಿಯುವುದು.

ನಿಶೇಚನ ಆರಂಭದ 24 ರಿಂದ 48 ಗಂಟೆಗಳ ನಂತರ, ಹಾರ್ಮೊನ್ ನ ಪತ್ತೆಹಚ್ಚುವುದರ ಮೂಲಕ ಗರ್ಭಧಾರಣೆಯನ್ನು ಧೃಢೀಕರಿಸಬಹುದು ಇದು ತಾಯಿಯ ರಕ್ತದಲ್ಲಿ ಕಾಣುವುದು ಇದನ್ನು ಮೊದಲ ಗರ್ಭಧಾರಣಾಂಶ ಎನ್ನುವರು.

Capítulo 5   Etapas iniciales (mórula y blastocito) y células madre

ನಿಶೇಚನದ ನಂತರ 3 ರಿಂದ 4 ದಿನಗಳಲ್ಲಿ, ಭ್ರೂಣದ ವಿಭಜಿತ ಕೋಶಗಳು ಗೋಳಾಕೃತಿಯನ್ನು ಪಡೆಯುವವು ಆ ಭ್ರೂಣವನ್ನು ಮೊರುಲ ಎನ್ನುವರು.

4 ರಿಂದ 5 ದಿನಗಳ ವೇಳೆಗೆ ಕೋಶಗಳ ಗೋಳಾಕೃತಿಯಲ್ಲಿ ರಂಧ್ರವೊಂದು ಕಾಣುತ್ತದೆ ಹಾಗೂ ಆ ಭ್ರೂಣವನ್ನು ಬ್ಲಾಸ್ಟೊಸಿಸ್ಟ್ ಎಂದು ಕರೆಯುವರು.

ಬ್ಲಾಸ್ಟೊಸಿಸ್ಟ್ ನೊಳಗಿನ ಕೋಶಗಳನ್ನು ಅಂತರ್ ಕೋಶ ಸಮೂಹ ಎಂದು ಕರೆಯುವರು ತಲೆ, ದೇಹ ಹಾಗೂ ಇತರ ರಚನೆಗಳಿಗೆ ಇದು ಎಡೆಮಾಡಿಕೊಡುತ್ತದೆ ಇವುಗಳು ಮಾನವನ ಬೆಳವಣಿಗೆಗೆ ಅತಿ ಮಹತ್ವದ್ದಾಗಿದೆ.

ಅಂತರ್ ಕೋಶ ಸಮೂಹದೊಳಗಿನ ಕೋಶಗಳನ್ನು ಅವುಗಳ ಸಾಮರ್ಥ್ಯದ ಕಾರಣ ಇವನ್ನು ಭ್ರೂಣವಂಶ ಕೋಶಗಳೆಂದು ಕರೆಯುವರು 200 ಕ್ಕಿಂತ ಹೆಚ್ಚಿನ ಬಗೆಯ ಕೋಶಗಳನ್ನು ನಿರ್ಮಿಸುವ ಶಕ್ತಿ ಇವಕ್ಕಿದೆ ಮಾನವ ದೇಹವು ಇವನ್ನು ಒಳಗೊಂಡಿದೆ.

Capítulo 6   1 a 1½ semanas: implantación y gonadotropina coriónica humana (GCH)

ಯೋನಿ ನಾಳದ ಮೂಲಕ ಚಲಿಸಿದ ನಂತರ, ಆರಂಭಿಕ ಭ್ರೂಣವು ತನಗೆ ತಾನೆ ಒಳಗೆ ಹುದುಗಿಕೊಳ್ಳುವುದು ತಾಯಿಯ ಗರ್ಭಾಶಯದ ಒಳಗಿನ ಗೋಡೆಯಲ್ಲಿ ಇದು ಘಟಿಸುತ್ತದೆ. ನೆಲೆಗೊಳಿಸುವ ಈ ಪ್ರಕ್ರಿಯೆಯು, 6 ದಿನಗಳಲ್ಲಿ ಆರಂಭಗೊಳ್ಳುತ್ತದೆ ಹಾಗೂ ನಿಶೇಚನದ 10 ರಿಂದ 12 ದಿನಗಳ ನಂತರ ಅಂತ್ಯಗೊಳ್ಳುತ್ತದೆ.

ಬೆಳವಣಿಗೆಯಲ್ಲಿರುವ ಭ್ರೂಣದ ಕೋಶಗಳಿಂದ ಹಾರ್ಮೋನ್ ಉತ್ಪತ್ತಿಯಾಗುತ್ತದೆ ಇದನ್ನು ಮಾನವ ಕೊರಿಯೊನಿಕ್ ಗೊನಾಡೊಟ್ರೊಪಿನ್ ಅಥವಾ ಎಚ್.ಸಿ.ಜಿ ಎನ್ನುವರು, ಇದು ಹೆಚ್ಚಿನ ಗರ್ಭ ಪರೀಕ್ಷೆಗಳಲ್ಲಿ ಕಂಡುಬರುತ್ತದೆ.

ಎಚ್ ಸಿ.ಜಿ.ಯು ಮಹಿಳೆಯ ಹಾರ್ಮೋನ್ ನ್ನು ನಿರ್ದೇಶಿಸುತ್ತದೆ ಇದು ಸಾಮಾನ್ಯ ಋತುಚಕ್ರವನ್ನು ತಡೆಯುತ್ತದೆ, ಹಾಗೂ ಗರ್ಭವು ಮುಂದುವರೆಯಲು ಸಹಕರಿಸುತ್ತದೆ.

Capítulo 7   La placenta y el cordón umbilical

ನೆಲೆಗೊಳ್ಳುವ ಪ್ರಕ್ರಿಯೆ ನಂತರ, ಬ್ಲಾಸ್ಟೋಸಿಸ್ಟ್ ಮೇಲ್ಭಾಗದ ಕೋಶಗಳು ಗರ್ಭವೇಷ್ಟನ ಎಂದು ಕರೆಯುವ ರಚನೆಯ ಭಾಗಕ್ಕೆ ಎಡೆಮಾಡಿಕೊಡುತ್ತದೆ, ಇದು ಮಧ್ಯವರ್ತಿಯಂತೆ ವರ್ತಿಸಿ ಮಾತೃ ಹಾಗೂ ಭ್ರೂಣದ ಪರಿಚಲನೆ ವ್ಯವಸ್ಥೆಯ ನಡುವೆ ಸಹಕರಿಸುತ್ತದೆ.

ಗರ್ಭವೇಷ್ಟನವು ಮಾತೃವಿನಿಂದ ಆಮ್ಲಜನಕ, ಪೌಷ್ಟಿಕಾಂಶ, ಹಾರ್ಮೋನುಗಳು ಹಾಗೂ ಔಷಧೀಯ ವಸ್ತುಗಳನ್ನು ಶಿಶುವಿಗೆ ವಿತರಿಸುವುದು; ತ್ಯಾಜ್ಯ ವಸ್ತುಗಳನ್ನು ವರ್ಜಿಸುವುದು; ಹಾಗೂ ಮಾತೃವಿನ ರಕ್ತದ ಮಿಶ್ರಣವನ್ನು ತಡೆಯುವುದು ಭ್ರೂಣ ಅಥವಾ ಜೀವ ಪಿಂಡದ ರಕ್ತದೊಡನೆ.

ಗರ್ಭವೇಷ್ಟನವು ಹಾರ್ಮೋನುಗಳನ್ನು ಉತ್ಪಾದಿಸುವುದು ಹಾಗೂ ಭ್ರೂಣ ಹಾಗೂ ಜೀವ ಪಿಂಡದ ಉಷ್ಣತೆಯನ್ನು ಕಾಪಾಡತ್ತದೆ ಉಷ್ಣತೆಯು ಮಾತೃವಿನದ್ದಕ್ಕಿಂತ ಹೆಚ್ಚಾಗಿರುತ್ತದೆ.

ಗರ್ಭವೇಷ್ಟನವು ಬೆಳೆಯುತ್ತಿರುವ ಶಿಶುವಿನೊಡನೆ ಸಂಪರ್ಕ ಹೊಂದಿರುತ್ತದೆ ಇದು ಹೊಕ್ಕಳು ಬಳ್ಳಿಯ ಮೂಲಕ ಸಾಧ್ಯವಾಗುತ್ತದೆ.

ಗರ್ಭವೇಷ್ಟನದಲ್ಲಿನ ಜೀವ ರಕ್ಷಕ ಸಾಮರ್ಥ್ಯವು ಯಾವುದೇ ಆಧುನಿಕ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳನ್ನು ಮೀರಿಸಬಲ್ಲದು.

Capítulo 8   Nutrición y protección

ಒಂದು ವಾರದ ಹೊತ್ತಿಗೆ, ಅಂತರ್ ಕೋಶ ಸಮೂಹದ ಕೋಶಗಳು ಎರಡು ಪದರುಗಳನ್ನು ರೂಪಿಸುವವು ಅವುಗಳೆಂದರೆ ಹೈಪೊಬ್ಲಾಸ್ಟ್ ಹಾಗೂ ಎಪಿಬ್ಲಾಸ್ಟ್,

ಹೈಪೊಬ್ಲಾಸ್ಟ್ ಪದರು ಅಂಡವೃದ್ಧಿಯ ಚೀಲದಲ್ಲಿ ಜನೆಗೆ ಎಡೆ ಮಾಡಿಕೊಡುತ್ತದೆ ಈ ರಚನೆಗಳ ಮೂಲಕ ತಾಯಿಯು ಪೌಷ್ಟಿಕಾಂಶಗಳನ್ನು ಆರಂಭಿಕ ಭ್ರೂಣಕ್ಕೆ ಪೂರೈಸುವಳು.

ಎಪಿಬ್ಲಾಸ್ಟ್ ನ ಕೋಶಗಳು ಆಮ್ನಿಯಾನ್ ಎಂಬ ಪೊರೆಯನ್ನು ರೂಪಿಸುವವು, ಈ ಪೊರೆಯೊಳಗೆ, ಭ್ರೂಣ ಹಾಗೂ ನಂತರ ಜೀವ ಪಿಂಡವು ಜನನದವರೆಗೂ ಬೆಳೆಯುತ್ತದೆ.

Capítulo 9   2 a 4 semanas: capas germinales y formación de órganos

ಸುಮಾರು 2 1/2 ವಾರದ ಹೊತ್ತಿಗೆ ಎಪಿಬ್ಲಾಸ್ಟ್ ರೂಪಿಸುವುದೇನೆಂದರೆ 3 ವಿಶೇಷ ಅಂಗಾಂಶಗಳನ್ನು ರೂಪಿಸುತ್ತದೆ, ಅಥವಾ ಜೀವಾಂಕುರದ ಪದರುಗಳು, ಇವುಗಳನ್ನು ಎಕ್ಟೋಡರ್ಮ್, ಎಂಡೋಡರ್ಮ್, ಹಾಗೂ ಮಿಸೋಡರ್ಮ್ ಎಂದು ಕರೆಯುವರು.

ಎಕ್ಟೋಡರ್ಮ್ ಎಡೆಮಾಡಿಕೊಡುವ ಅನೇಕ ರಚನೆಗಳ ಒಳಗೊಂಡಿರುವ ಭಾಗಳೆಂದರೆ ಮೆದಳು, ಬೆನ್ನುಹುರಿ, ನರಗಳು, ಚರ್ಮ, ಉಗುರುಗಳು ಹಾಗೂ ಕೂದಲು.

ಎಂಡೋಡರ್ಮ್ ಶ್ವಾಸೋಚ್ಛ್ವಾಸ ಕ್ರಿಯೆಗಳ ಪಥಗಳನ್ನು ಹಾಗೂ ಪಚನ ಕ್ರಿಯೆಯ ಪ್ರದೇಶವನ್ನು ಉತ್ಪಾದಿಸುವುದು, ಹಾಗೂ ಪ್ರಮುಖ ಅಂಗಗಳ ಭಾಗಗಳನ್ನು ನಿರ್ಮಿಸುವುದು ಉದಾಹರಣಿಗೆ ಯಕೃತ್ತು ಹಾಗೂ ಮೇದೋಜ್ಜಿರಕ ಗ್ರಂಥಿ.

ಮೀಸೋಡರ್ಮ್ ರೂಪಿಸುವ ಭಾಗಗಳೆಂದರೆ, ಹೃದಯ, ಮೂತ್ರಜನಕಾಂಗ, ಮೂಳೆಗಳು, ಮೃದ್ವಸ್ಥಿ, ಸ್ನಾಯುಗಳು, ರಕ್ತಕೋಶಗಳು, ಹಾಗೂ ಇತರೆ ರಚನೆಗಳು

ಮೂರು ವಾರದ ಹೊತ್ತಿಗೆ ಮೆದುಳು 3 ಪ್ರಾಥಮಿಕ ಭಾಗವಾಗಿ ವಿಭಜಿಸುವುದು ಅವುಗಳು ಮುಂಭಾಗದ ಮೆದುಳು, ಮಧ್ಯದ ಮೆದುಳು ಹಾಗೂ ಹಿಂಬದಿಯ ಮೆದುಳು

ಶ್ವಾಸೋಚ್ಛ್ವಾಸ ಹಾಗೂ ಪಚನ ವ್ಯವಸ್ಥೆಯ ಬೆಳವಣಿಗೆಯು ನಿರ್ಮಾಣದ ಹಂತದಲ್ಲಿರುತ್ತದೆ

ಮೊದಲ ರಕ್ತ ಕೋಶಗಳು ಅಂಡವೃದ್ಧಿಯ ಚೀಲದಲ್ಲಿ ಕಾಣಿಸುತ್ತಿದ್ದಂತೆ ರಕ್ತನಾಳಗಳ ರಚನೆ ಭ್ರೂಣದಾದ್ಯಂತ ಕಾಣುವುದು ಹಾಗೂ ನಾಳಾಕೃತಿಯ ಹೃದಯ ಉದ್ಭವಿಸುವುದು.

ತಕ್ಷಣವೇ, ವೇಗವಾಗಿ ಬೆಳೆಯುತ್ತಿರುವಹೃದಯವು ತನಗೇ ತಾನೇ ಮಡಿಸಿಕೊಳ್ಳುತ್ತಾ ಪ್ರತ್ಯೇಕ ಗೂಡುಗಳಾಗಿ ಅಭಿವೃದ್ಧಿಗೊಳ್ಳ ತೊಡಗುವವು

ಹೃದಯ ಬಡಿತವು 3 ವಾರ ಹಾಗೂ 1 ವಾರ ನಿಶೇಚನದ ನಂತರ ಪ್ರಾರಂಭಗೊಳ್ಳುವುದು

ಪರಿಚಲನಾ ವ್ಯವಸ್ಥೆಯು ದೇಹ ರಚನೆಯ ಪ್ರಥಮ ಹಂತ, ಅಥವಾ ಸಂಬಂಧಿತ ಅಂಗಗಳ ಸಮೂಹವು, ಕಾರ್ಯಗತ ಸ್ಥಿತಿ ಸಾದನೆಯ ಪ್ರಥಮ ಹಂತವಾಗಿದೆ

Capítulo 10   3 a 4 semanas: el plegamiento del embrión

3 ಹಾಗೂ 4 ವಾರಗಳ ಮಧ್ಯದಲ್ಲಿ, ದೈಹಿಕ ಯೋಜನೆಯು ಕೆಳಕಂಡಂತೆಗೋಚರಿಸುವುದು ಮೆದುಳು, ಬೆನ್ನುಹುರಿ, ಹಾಗೂ ಭ್ರೂಣದ ಹೃದಯವನ್ನು ಸುಲಭವಾಗಿ ಗುರುತಿಸಬಹುದು ಇದು ಅಂಡಚೀಲದ ಜನೆಯಲ್ಲಿ ಸ್ವಷ್ಟವಾಗಿರುವುದು.

ವೇಗದ ಬೆಳವಣಿಗೆಯಿಂದಾಗಿ ಬಾಗಿದ ಪರಿಣಾಮವನ್ನು ಸಾಪೇಕ್ಷವಾಗಿ ಚಪ್ಪಟೆಯಾದ ಭ್ರೂಣದಲ್ಲಿ ಕಾಣಬಹುದು. ಈ ಪ್ರಕ್ರಿಯೆಯ ಚಾಲನೆಯಿಂದಾಗಿ ಅಂಡಚೀಲದಲ್ಲಿ ಜನೆಯ ಭಾಗವು ಪಥವಾಗಿ ಮಾರ್ಪಟ್ಟು ಪಚನ ವ್ಯವಸ್ಥೆಯಾಗುವುದು ಹಾಗೂ ಎದೆ ಭಾಗವನ್ನು ರೂಪಿಸುವುದು ಜಠರದ ಗೂಡುಗಳನ್ನು ಬೆಳವಣಿಗೆಯಾಗುವ ಶಿಶುವಿನಲ್ಲಿ ರೂಪಿಸುವುದು.