Skip Navigation

National Geographic Society Este programa se distribuye en los Estados Unidos y Canadá por National Geographic y EHD. [obtenga más información]

DVD ilustrado plurilingüe

La biología del desarrollo prenatal




ಪ್ರಸವ ಪೂರ್ವ ಬೆಳವಣಿಗೆ ಜೀವಶಾಸ್ತ್ರ

.ಕನ್ನಡ [Kannada]


 

Descargar versión en formato PDF  ¿Qué es PDF?
 

Capítulo 40   3 a 4 meses (12 a 16 semanas): papilas gustativas, movimientos mandibulares, reflejo perioral, primeros movimientos

11 ಹಾಗೂ 12 ವಾರಗಳ ಮಧ್ಯದಲ್ಲಿ, ಭ್ರೂಣದ ಭಾರವು ಶೇ 60 ರಷ್ಟು ಹೆಚ್ಚುವುದು.

12 ವಾರಗಳ ಅವಧಿಯು 3 ಹಂತದಲ್ಲಿನ 1ನೇ ಭಾಗದ ಅಂತ್ಯವನ್ನು ತೋರುತ್ತದೆ. ಗರ್ಭಾವಸ್ಥೆಯ 3ನೇ ಒಂದು ಭಾಗ ಇದಾಗಿರುತ್ತದೆ.

ಬಾಯಿಯೊಳಗೆ ರಸಗ್ರಂಥಿಗಳು ಸ್ಫುಟಗೊಳ್ಳುವವು.
ಜನನ ವೇಳೆಗೆ, ರಸಗ್ರಂಥಿಗಳು ನಾಲಗೆ ಹಾಗೂ ಬಾಯಿ ಮೇಲ್ಭಾಗದಲ್ಲಿ ಇರುವವು.

ಕರುಳಿನ ಚಲನೆಯು 12 ವಾರಗಳಷ್ಟು ಮೊದಲೇ ಗೋಚರಿಸುವುದು, ಹಾಗೂ 6 ವಾರಗಳ ತನಕ ಮುಂದುವರೆಯುವುದು.

ಭ್ರೂಣ ಹಾಗೂ ನವಜಾತ ದೊಡ್ಡಕರುಳಿನಿಂದ ವರ್ಜಿಸಲ್ಪಟ್ಟ ವಸ್ತುವನ್ನು ಮೆಕೋನಿಯಮ್ ಎನ್ನುವರು. ಅದರಲ್ಲಿ ಪಚನಕಾರಿ ಕಿಣ್ವಗಳು, ಪ್ರೋಟೀನ್ ಗಳು, ಹಾಗೂ ಸತ್ತಕೋಶಗಳಿರುತ್ತವೆ. ಇವುಗಳು ಪಚನನಾಳದಿಂದ ವಿಸರ್ಜಿಸಿದ ವಸ್ತುಗಳು.

12 ವಾರಗಳ ವೇಳೆಗೆ, ಮೇಲಿನ ಅವಯವದ ಉದ್ದ ದೇಹದ ಗಾತ್ರಕ್ಕನುಗುಣವಾಗ ಪ್ರಮಾಣಕ್ಕೆ ತಲುಪಿರುತ್ತದೆ. ಕೆಳಗಿನ ಅವಯವಗಳು ತಮ್ಮ ಗರಿಷ್ಠ ಪ್ರಮಾಣವನ್ನು ತಲುಪಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ.

ಬೆನ್ನು ಹಾಗೂ ಶಿರದ ಹಿಂಬದಿಯನ್ನು ಹೊರತುಪಡಿಸಿ, ಸಂಪೂರ್ಣ ಭ್ರೂಣದ ದೇಹವು ಲಘು ಸ್ಪರ್ಶಕ್ಕೆ ಸ್ಪಂದಿಸುತ್ತದೆ.

ಲಿಂಗ ಆಧಾರಿತ ಬೆಳವಣಿಗೆಯ ಭೇದಗಳು ಮೊದಲ ಬಾರಿಗೆ ಗೋಚರಿಸುತ್ತವೆ. ಉದಾಹರಣೆಗೆ, ಹೆಣ್ಣು ಭ್ರೂಣದ ದವಡೆಯ ಚಲನೆಯು ಗಂಡು ಭ್ರೂಣದ ಚಲನೆಗಿಂತ ಹೆಚ್ಚಾಗಿರುತ್ತದೆ.

ಹಿಂದೆ ಹೇಳಿದ ಹಂಜರಿಕೆಯ ಸ್ಪಂದನಕ್ಕೆ ವ್ಯತರಿಕ್ತವಾಗಿ, ಬಾಯಿಯ ಬಳಿಯ ಉತ್ತೇಜನದಿಂದ ಭ್ರೂಣವು ಆದಿಕ್ಕಿನೆಡೆ ತಿರುಗುವುದಲ್ಲದ ಬಾಯಿಯನ್ನು ಕೂಡ ತೆರೆಯುವುದು. ಈ ಪ್ರತಿಕ್ರಿಯೆಯನ್ನು ಮೂಲ ಪ್ರತಿಕ್ರಿಯೆ ಎನ್ನುವರು. ಹಾಗೂ ಇದು ಜನನದ ನಂತರವು ಇರುವುದು, ಈ ಮೂಲಕ ನವಜಾತ ಶಿಶುವು ತನ್ನ ತಾಯಿಯ ಸ್ತನವನ್ನು ಪಡೆಯುವುದು ಎದೆಹಾಲನ್ನು ಕುಡಿಯಲು.

ಮುಖವು ಪಕ್ವವಾಗುತ್ತಾ ಹೋಗುವುದು ಕೊಬ್ಬು, ಕೆನ್ನೆಯ ಭಾಗದಲ್ಲಿ ಸಂಗ್ರಹಿಸಿದಂತೆಲ್ಲ ಹಲ್ಲಿನ ಬೆಳವಣಿಗೆಯು ಪ್ರಾರಂಭವಾಗುವುದು.

15 ವಾರಗಳ ವೇಳೆಗೆ ರಕ್ತ ರೂಪಿಸುವ ವಂಶ ಕೋಶಗಳು ಕಾಣುವವು ಹಾಗೂ ಎಲುಬಿನ ನೆಣದಲ್ಲಿ ಅಸಂಖ್ಯವಾಗಿ ಬೆಳೆಯುವವು. ಹೆಚ್ಚಿನ ರಕ್ತ ಕೋಶವು ಇಲ್ಲಿಯೆ ಘಟಿಸುವುದು.

6 ವಾರದ ಭ್ರೂಣದಲ್ಲಿ ಚಲನೆಯು ಪ್ರಾರಂಭಗೊಂಡಿದ್ದರೂ, ಗರ್ಭೀಣಿ ಸ್ತ್ರೀಯು ಭ್ರೂಣದ ಚಲನೆಯ ಮೊದಲ ಸಂಕೇತವನ್ನು 14 ರಿಂದ 18 ವಾರಗಳ ಮಧ್ಯದಲ್ಲಿ ಅನುಭವಿಸುವಳು. ಸಾಂಪ್ರದಾಯಿಕವಾಗಿ, ಈ ಘಟನೆಯನ್ನು ವೇಗ ವರ್ಧನೆ ಎನ್ನುವರು.