Skip Navigation

National Geographic Society Este programa se distribuye en los Estados Unidos y Canadá por National Geographic y EHD. [obtenga más información]

DVD ilustrado plurilingüe

La biología del desarrollo prenatal




ಪ್ರಸವ ಪೂರ್ವ ಬೆಳವಣಿಗೆ ಜೀವಶಾಸ್ತ್ರ

.ಕನ್ನಡ [Kannada]


 

Descargar versión en formato PDF  ¿Qué es PDF?
 

Capítulo 1   Introducción

ಏಕ ಕೋಶೀಯ ಮಾನವ ಜೀವಾಣುವು ಕ್ರಿಯಾತ್ಮಕ ಗತಿಗೆ ಒಳಪಟ್ಟು ಸಹಸ್ರ ಕೋಟಿ ಕೋಶಗಳ ವಯಸ್ಕನಾಗುವುದು ಬಹುಶಃ ಪ್ರಕೃತಿಯ ಎಲ್ಲ ಚಮತ್ಕಾರಗಳಲ್ಲಿ ಅತ್ಯಂತ ಮಹತ್ತರವಾದದ್ದು

ಈಗ ಸಂಶೋಧಕರು ತಿಳಿದಿರುವಂತೆ ದಿನನಿತ್ಯದ ಅನೇಕ ಕಾರ್ಯಗಳು ವಯಸ್ಕರ ದೇಹದಲ್ಲಿ ಘಟಿಸುತ್ತಿದ್ದು- ಗರ್ಭಧಾರಣೆಯ ಅವಧಿಯಲ್ಲಿ ಅವು ಸ್ಥಿರಗೊಳ್ಳುತ್ತವೆ ಅನೇಕ ವೇಳೆ ಜನನಕ್ಕಿಂತ ಬಹು ಮುಂಚಿತವಾಗಿಯೆ.

ಜನನ ಪೂರ್ವದ ಅಭಿವೃದ್ಧಿಯನ್ನು ಹೆಚ್ಚಾಗಿ ಸಿದ್ಧತಾವಧಿ ಎಂದು ಅರ್ಥ ಮಾಡಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಬೆಳೆಯುತ್ತಿರುವ ಮಾನವ ಅನೇಕ ರಚನೆಗಳನ್ನು ಸಂಪಾದಿಸುತ್ತಾನೆ, ಹಾಗೂ ಅವಶ್ಯಕ ಅನೇಕ ಕುಶಲತೆಯನ್ನು ಅಭ್ಯಸಿಸುತ್ತಾನೆ. ಜನನದ ನಂತರದ ಉಳಿವಿಗಾಗಿ.

Capítulo 2   Terminología

ಸಾಧಾರಣವಾಗಿ ಗರ್ಭಧಾರಣೆಯು 38 ವಾರಗಳವರೆಗೆ ಕೊನೆಗೊಳ್ಳುತ್ತದೆ. ಇದು ನಿಶೇಚನ ಅವಧಿ ಅಥವಾ, ಗರ್ಭಧಾರಣೆಯಿಂದ ಜನನದವರೆಗಿನ ಸಮಯವಾಗಿರುತ್ತದೆ.

ನಿಶೇಚನ ನಂತರದ ಮೊದಲ 8 ವಾರಗಳಅವಧಿಯಲ್ಲಿ, ಬೆಳೆಯುವ ಮಾನವ ರಚನೆಯನ್ನು ಭ್ರೂಣವೆಂದು ಕರೆಯಲಾಗುತ್ತದೆ, ಇದರ ಅರ್ಥ ಅಂತರ್ ಬೆಳವಣಿಗೆ ಎಂದು." ಈ ಕಾಲವನ್ನು ಭ್ರೂಣಾವಧಿ ಎಂದು ಕರೆಯಲಾಗುತ್ತದೆ, ಈ ರೂಪದ ಲಕ್ಷಣಗಳು ಹೆಚ್ಚಿನ ಪ್ರಮುಖವಾದ ದೈಹಿಕ ವ್ಯವಸ್ಥೆಯನ್ನು ಹೊಂದಿರುತ್ತವೆ.

8 ವಾರಗಳ ನಂತರದಿಂದ ಗರ್ಭಾವಸ್ಥೆಯ ಅಂತ್ಯದ ತನಕ, "ಬೆಳೆಯುವ ಮಾನವನನ್ನು ಪಿಂಡ ಎಂದು ಕರೆಯಲಾಗುತ್ತದೆ." ಇದರರ್ಥ ಇನ್ನು ಜನಿಸದ ಸಂತಾನ ಎಂದು." ಈ ಕಾಲಾವಧಿಯನ್ನು ಪಿಂಡಾವಧಿ ಎಂದು ಕರೆಯಲಾಗುತ್ತದೆ, ಆಗ ದೇಹವು ವಿಸ್ತಾರವಾಗಿ ಬೆಳೆಯುವುದು ಹಾಗೂ ವ್ಯವಸ್ಥೆಗಳು ಕಾರ್ಯಶೀಲವಾಗುತ್ತದೆ.

ಈ ಕಾರ್ಯಕ್ರಮದ ಎಲ್ಲಾ ಭ್ರೂಣ ಹಾಗೂ ಪಿಂಡಾವಸ್ಥೆಗಳು ನಿಶೇಚನ ಅವಧಿಗೆ ಸಂಬಂಧಿಸಿದುದಾಗಿದೆ.